ಫೆಲ್ಪ್ಸ್, ಸ್ಯಾಮ್ಯುಯಲ್ 
	1804-78. ನಟ. ಹುಟ್ಟಿದ್ದು ಡೇವನ್ ಪೋರ್ಟ್‍ನಲ್ಲಿ. 1887ರಲ್ಲಿ ಲಂಡನ್ನಿನ ಹೇಮಾರ್ಕೆಟನಲ್ಲಿ ಷೈಲಾಕ್ ಪಾತ್ರದ ಮೂಲಕ ಮೊದಲ ಬಾರಿಗೆ ರಂಗದ ಮೇಲೆ ಕಾಣಿಸಿಕೊಂಡ. 1844 ಮತ್ತು 1862ರ ಅವಧಿಯಲ್ಲಿ ಈತ ತಾಮಸ್ ಗ್ರೀನ್‍ವುಡ್ ಜೊತೆ ಸೇರಿಕೊಂಡು ಷೇಕ್ಸ್‍ಪಿಯರ್‍ನ ಮೂವತ್ತಕ್ಕೂ ಹೆಚ್ಚಿನ ನಾಟಕಗಳು ಹಾಗೂ ಇತರ ನಾಟಕಕಾರರ ಉತ್ತಮ ನಾಟಕಗಳನ್ನು ರಂಗಭೂಮಿಯ ಮೇಲೆ ಪ್ರದರ್ಶನಕ್ಕೆ ಅಣಿಗೊಳಿಸಿದ. ಈತನ ಪ್ರಯತ್ನದಿಂದಾಗಿ ರಂಗಭೂಮಿಯ ಬಗ್ಗೆ ಜನರಲ್ಲಿ ಒಲವು ಮೂಡಿತು. ಈತ ಲಿಯರ್, ಮ್ಯಾಕ್‍ಬೆತ್, ಒತೆಲೊ ಮತ್ತು ಸರ್ ಜೈಜ್ ಓವರಿರೀಚ್ ಪಾತ್ರಗಳಲ್ಲಿ ಪ್ರಮುಖವಾಗಿ ರಂಗಭೂಮಿಯ ಮೇಲೆ ಕಾಣಿಸಿಕೊಳ್ಳುತ್ತಿದ್ದ. ಬಾತಮ್, ಫಾಲ್‍ಸ್ಟಾಫ್ ಮತ್ತು ಷ್ಯಾಲೊ ಮುಂತಾದ ಹಾಸ್ಯ ಪ್ರಧಾನ ಪಾತ್ರಗಳಲ್ಲೂ ಜನರನ್ನು ರಂಜಿಸುತ್ತಿದ್ದ.
 	(ಎಚ್.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ